Friday 4 January, 2008

ಭಾರತದ [ಪ್ರ]ಗತಿ



ಭಾರತ ಭಾರತ ಭಾರತ ದೇಶ
ಬಡವರಿಂದ ಕೂಡಿದ ಶ್ರೀಮಂತ ದೇಶ
ಇಲ್ಲಿನ ಜನ ಜಗತ್ತಿನ ಶೇಷ
ಬಡತನ ಆಗಬೇಕು ನಿಶೇಷ

ನಮ್ಮ ಬಡತನಕೆ ಕಾರಣ ಇಂಗ್ಲೀಷರು
ಎಂದು ಹೇಳುವರು ಭಾರತೀಯರು
ಜಪಾನ್ ದೇಶವೂ ಕೂಡಿತ್ತು ಬಡತನದಿಂದ
ಈಗ ಅದು ನಲಿಯುತಿದೆ ಅಭಿವೃದ್ಧಿಯಿಂದ

ಇರುಳಲ್ಲಿ ದೊರಕಿದ ಸ್ವಾತಂತ್ರ್ಯ
ಮಾಡಿದೆ ನಮ್ಮನ್ನೆಲ್ಲಾ ಅತಂತ್ರ
ಶ್ರೀಮಂತರಿಗೆ ಹಣದ ಮೋಹ
ಬಡವನಿಗೆ ಹಸಿವು ದಾಹ

ಅವನ ಮೇಲೆ ಇವನು ಬಿದ್ದು ಕುರ್ಚಿಗಾಗಿ ಸಮರ
ಇವರಾರೂ ಆಗುವುದಿಲ್ಲ ಜೀವನದಲ್ಲಿ ಅಮರ
ಭಾರತದ ಜನಸಂಖ್ಯೆ ಮುಟ್ಟಿತು ನೂರು ಕೋಟಿ
ಯಾರಾದರೂ ಇರುವರೆ ಜನಸಂಖ್ಯೆಯಲ್ಲಿ ಭಾರತಕ್ಕೆ ಸಾಟಿ?


-- ಅರುಣ ಸಿರಿಗೆರೆ

ಭಾವಬಿಂದು



ಅವನೊಬ್ಬ ಯುವಕ
ಮತ್ತು ಅವನು ಭಾವುಕ
ಭಾವನೆಗಳೇ ಅವನ ಜೀವಾಳ
ಅವನ ಜೀವನ ತುಂಬಾ ಸರಳ


ಚಿಕ್ಕಂದಿನಿಂದ ಕನಸುಗಳ ಹೊತ್ತವನು
ಯೌವ್ವನದಲ್ಲಿ ಅವುಗಳಿಗೆ ಸೋತವನು
ಜೀವನದಲ್ಲಿ ಅವನಿಗಿಲ್ಲ ಆಸೆ
ಈ ಲೋಕವೆಲ್ಲಾ ಅವನಿಗೆ ನಿರಾಸೆ


ಅವನ ಜೀವನದ ಆಧಾರ ಅವಳು
ಅವನ ಜೀವನದ ಹುಮ್ಮಸ್ಸು ಅವಳು
ಅವನಿಗಾಗಿ ಸೋತವಳು
ಅವನ ಗೆಲುವಿನಲ್ಲಿ ಖುಷಿ ಪಡುವಳು


ಅವನೆದೆಯ ತುಂಬಾ ಆವರಿಸಿದವಳು
ಅವನ ಕನಸುಗಳ ನನಸಾಗಿಸಿದವಳು
ಅವನ ಪ್ರೀತಿಯ ತಂಗಿ
ಮಾಡುವುದಿಲ್ಲ ಅವನನ್ನ ಏಕಾಂಗಿ


ತಂಗಿಯೆಂದರೆ ಅವನಿಗೆ ಪ್ರಾಣ
ಅವನ ಜೀವನದ ಆಶಾಕಿರಣ
ಅವಳಿಗಾಗಿಯೇ ಅವನ ಜೀವನ
ಅವಳಿಲ್ಲದೆ ಅವನಿಗೆ ಲೋಕವೇ ಮೌನ


-- ಅರುಣ ಸಿರಿಗೆರೆ

ಮಿನಿ ರಾಮಾಯಣ

ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು..
ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ...




ಸೀತೆಯನ್ನು ಹೊತ್ತುಕೊಂಡು ಹೋದ ಲಂಕಾಧಿಪತಿ
ಇದಕ್ಕೆ ಕಾರಣ ಆ ಮಾರೀಚನ ಕಿತಾಪತಿ
ಆಗ ಎಷ್ಟು ನರಳಿದನೋ ಪಾಪ ಸೀತೆಯ ಪತಿ
ಇಷ್ಟಕ್ಕೆಲ್ಲಾ ಕಾರಣ ಸೀತೆಯ ಆಸೆಗಳಿಗಿಲ್ಲದ ಮಿತಿ
ಸೀತೆಯ ಕರೆತರಲು ಹೋದ ಹನುಮಂತ
ಅವನಿಗೆ ಶ್ರೀರಾಮನೇ ಭಗವಂತ
ಲಂಕೆಗೆ ಹೋದ ಹನುಮಂತನಿಂದ ಲಂಕೆ ಸರ್ವನಾಶ
ಲಂಕಾಧಿಪತಿಗೆ ಹಾಕಿದ ಬಿಡಿಸಲಾಗದ ಪಾಶ
ಈ ಜಗತ್ತಿನಲ್ಲಿ ಹೆಚ್ಚಾಗಿದೆ ಮೋಸ
ರಾಮನಿಗೆ ಎಷ್ಟು ಕಷ್ಟದಿಂದ ಕೂಡಿತ್ತೆಂದರೆ ವನವಾಸ
ಅದು ಕಾಯಿಸಿದರೂ ಮುರಿಯಾಲಾಗದ ಕಬ್ಬಿಣ
ಇದುವೇ ರಾಮಸೀತೆಯರ ರಾಮಾಯಣ
-- ಅರುಣ ಸಿರಿಗೆರೆ