Tuesday 27 November, 2012

ಸ್ವಪ್ನಗಳು




ಆಗಾಗ ಸವಿ ಸ್ವಪ್ನಗಳು, ಪ್ರೀತಿಯಾದಂತೆ..
ಪ್ರತಿದಿನ ಮುಂಜಾನೆ ನನ್ನವಳ
ತೋಳ ತೆಕ್ಕೆಯಲಿ ಕಣ್ತೆರೆದಂತೆ
ನನ್ನವಳ ಕೆನ್ನೆಗೆ ಮುತ್ತಿಡುವ 
ಬೆಳಕಿನ ಕಿರಣಗಳ ಓಡಿಸಲು
ಕಿಟಕಿಯ ಪರದೆಯ ಮುಚ್ಚಿದಂತೆ

ಆಗಾಗ ಸವಿ ಸ್ವಪ್ನಗಳು, ಪ್ರೀತಿಯಾದಂತೆ..
ಆ ಕ್ಯಾಡ್-ಬರೀಸ್ ಚೆಲುವೆಯಂತೆ
ನನ್ನಾಕೆ ಹಸಿ ಕೂದಲ ಹನಿಗಳನ್ನು ಕೊಡವಿ
ನನ್ನಲ್ಲಿರುವ ರಸಿಕನನ್ನು ಕೆಣಕಿದಂತೆ.
ನನ್ನಾಕೆಯ ಕೈಗೆ ಕೈ ಬೆಸೆದು
ಮುಸ್ಸಂಜೆಯ ಮರಳ ತೀರದಲಿ
ಮುಳುಗುವ ಸೂರ್ಯನ ದಿಟ್ಟಿಸಿದಂತೆ.

ಆಗಾಗ ಸವಿ ಸ್ವಪ್ನಗಳು, ಪ್ರೀತಿಯಾದಂತೆ..
ನಾನು ನನ್ನಾಕೆಯ ಮುಂಗುರಳ
ಜೊತೆ ಆಡುತ್ತಾ ದಿನ ಕಳೆದಂತೆ..
ನಾ ಅವಳ ಕೆನ್ನೆಗಳ ಮೇಲೆ
ಜಾರುವ ಇಬ್ಬನಿಯಾದಂತೆ
ಮತ್ತೆ ನಾನು ನನ್ನಾಕೆಯೆ
ಪ್ರೀತಿಯಲ್ಲಿ ಕರಗಿದಂತೆ.

ಈಗೀಗ ದುಸ್ವಪ್ನಗಳು ಮದುವೆಯಾದಂತೆ..
ನನ್ನಾಕೆ ನನ್ನನ್ನು ನಿದ್ರಾದೇವಿಯ 
ಮಡಿಲಿಂದ, ತಿವಿದು ಏಳಿಸಿದಂತೆ..
ಹಾಲು, ತರಕಾರಿ, ಸೊಪ್ಪು ತರಲು
ಮಾರ್ಕೆಟ್-ಗೆ ಅಟ್ಟಿದಂತೆ

ಈಗೀಗ ದುಸ್ವಪ್ನಗಳು ಮದುವೆಯಾದಂತೆ..
ನನ್ನಾಕೆಯ ಸೀರೆಗೆ ಮ್ಯಾಚಿಂಗ್
ಬ್ಲೌಸ್ ಹುಡುಕಾಡಿ ದಣಿದಂತೆ..
ನನ್ನಾಕೆಯ ದಾಹವನ್ನು ನೀಗಿಸದ 
ಬಂಗಾರ, ಬಳೆ, ಓಲೆಗಳನ್ನು 
ಅರಸುತ್ತ, ಅಲೆಮಾರಿಯಾದಂತೆ.

ಈಗೀಗ ಕೇವಲ ಸ್ವಪ್ನಗಳು..
ನನ್ನಾಕೆಯ ನಿರೀಕ್ಷೆಯ ಭಾರವನ್ನು
ಹೊರಲಾರದೆ ಕುಸಿದಂತೆ..
ನಾನು ನನ್ನಾಕೆಗೆ, ನನ್ನಾಕೆಯಿಂದ
ಸೋತಂತೆ.. ಸೋತು ಗೆದ್ದಂತೆ!!!

-- ಅರುಣ ಸಿರಿಗೆರೆ




5 comments:

ಚಿನ್ಮಯ ಭಟ್ said...

ಚೆನಾಗಿದೆ ಅರುಣ್.....
ಒಂದಿಷ್ಟು ಹೊಸತರಹದ ಉಪಮೆಗಳು...
ಈ ತರಹದ ಬಳಕೆ ನನಗಂತೂ ಇಷ್ಟವಾಯ್ತು..."ಕ್ಯಾಡ್-ಬರೀಸ್ ಚೆಲುವೆ"ಆಹಾ ಅದೆಷ್ಟು ನವೀನ ಪ್ರಯೋಗ...ಖುಷಿಯಾಯ್ತು...ಬರೆಯುತ್ತಿರಿ..

Unknown said...
This comment has been removed by the author.
sathish sirigere said...

super maga..

ಅರುಣ ಸಿರಿಗೆರೆ said...

ಕವನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಚಿನ್ಮಯ್ ಅವರಿಗೆ ತುಂಬಾ ಧನ್ಯಾವಾದಗಳು. :)

ಅರುಣ ಸಿರಿಗೆರೆ said...

Thanks Sathish sirigere :)